Posts

ಹಾಯ್ ಲೇ ಮೈ ಡಿಯರ್ ಕೋತೋ(ಕೋತಿ 😝) ಹೆಂಗಿದಿಯ....? ಆರಾಮಾಗಿ ಇಲ್ಲ ಅಂತ ಹೇಳಿದ್ರೆ ಬೀಳ್ತಾವೆ ನಿನ್ ಯಾವಾಗ್ಲೂ ಆರಾಮಾಗೆ happy ಆಗೆ ಇರ್ಬೇಕು ಒಂದೇ ನಂಗ್ ಗೊತ್ತಾಗಬೇಕು ನಿನ್ ಹೆಲ್ತ್ ಬಗ್ಗೆ care ತಗೋತಾ ಇಲ್ಲ ಅಂತ ಆವಾಗಿದ್ದೆ ಕಣೆಲೆ ನಿಂಗೆ ಮಾರಿ ಹಬ್ಬ ಆ ಹಬ್ಬ ಈ ಹಬ್ಬ ಎಲ್ಲಾ ಹಬ್ಬನು ಮಾಡ್ತೀನಿ.... ಭಯ ಪಡಬೇಡ ಈಗಲ್ಲ...😒 ಬಂದಾಗ....😂🙈 ಹಾ ಮತ್ತೆ ಏನು ಜಾಸ್ತಿ ಯೋಚನೆ ಮಾಡ್ಬೇಡ ಕಣೆಮ ಎಲ್ಲಾನೂ ಚಲಿ ಹೋಗುತ್ತಾ ಬ್ರದರ್ ಗು ಅವರ್ ತಪ್ಪು ಅರ್ಥ ಆಗುತ್ತಾ ಅವರು ನಮ್ಮನ್ನ ಬಿಟ್ಟು ಎಲ್ಲೂ ಹೋಗಲ್ಲ ನಮ್ಗೂ ಅವರನ್ನ ಬಿಟ್ಟು ಇರೋಕ ಆಗಲ್ಲ ಇದು ಏನೇ ಸೊಲ್ಪ ದಿನ ಆಟೆಯ😅...ಹಾಗೆ ನಾನಿ ಗಿಫ್ಟ್ ಕಳುಸ್ತಿರೋ ವಿಷಯ ಇದು ನಿಂಗ್ ತಲ್ಪೋ ಕಿನ್ನ ಮುಂಚೆನೇ ಗೊತ್ತಾಗುತ್ತೆ ಅಂತ ನಗ್ಯಾಕೋ ಎಡಗಣ ಬಡ್ಕೊಂಡ್ ಬಡ್ಕೊಂಡ ಹೇಳತೈತಿ ಗೊತ್ತದ್ರ ಗೊತ್ತಾಗಲಿ... ಲೇ ಇನ್ನ ಏನ್ ಅಪ್ಪ ಅಂದ್ರ ನಿಂಗ್ ನೋಡಿದ್ರ ಇಲ್ಲಿ ನಿಮ್ ಅಣ್ಣನ ನೋಡಿ ನು ಅಷ್ಟ ಭಯ ಆಗಿಲ್ಲ ನಿಂಗ್ ಕಂಡ್ರ ಅಷ್ಟ ಭಯ ಲೇ ಯಾಕೋ ಏನೋ ಗೊತ್ತಿಲ್ಲಾ 😁 ಆದ್ರೂ ನಿಂಗ್ ರಿಸನ್ ಬೇಕಲ್ಲ ಹೇಳ್ತೀನಿ ಓದು.... ನಿಂಗ್ ನೆಂಪಾದ ಅವತ ಒಂದಿನ ನೀ ಯಾವ್ದೋ ಒಂದ್ ಕಾರಣಕ್ಕ ಇಷ್ಟ ದೊಡ್ಡುದ ಚಾಕು ತಗೊಂಡಿ ಹಿಂಗ್ ಇನ್ನೇನ್ ಚುಚ್ಕೊಂಡ್ ಅನ್ನೋ ರೆಂಜಿಗ್ ಫೋಟೋ ತಗ್ದಿ ಕಳ್ಸಿದಲ್ಲ ಅದುಕ್ ಜಾಸ್ತಿ ಅಂಜಿಕಿ ಆಗೊದಂದ್ರ ಇದು ಮೊದ್ಲೇ ಮೆಂಟ್ಲು ಏನ್ ಮಾಡೋಕ್ಕು ಹಿಂಜರಿಯಲ ಅಂತ ಭಯ😝😁 ಆ ಫೋಟೋ ನನ್ ಹತ್...

ನನ್ನೊಲವಿನ ಒಲವು.........

ಮನಸಿಂದ ಮನಸ್ಪೂರ್ತಿಯಾಗಿ ಪ್ರೀಮಿಸಿದೇವು ನಾವಿಬ್ಬರೂ  ಕನಸಿಂದ ನನಸಾಗಿಸಿಕೊಳ್ಳಲು ಶ್ರಮಿಸಬೇಕಿದೆ ಇನ್ನೂ ನಾವಿಬ್ಬರೂ ಕಣ್ಣಲ್ಲೆ ಮೂಡಿದ ಸುಂದರ ಕಲ್ಪನೆಯಲ್ಲ ನಮ್ಮೀ ಪ್ರೀತಿ ಎಲ್ಲರ ಮನ ಗೆಲ್ಲುವ ವಾಸ್ತವವಾಗಬೇಕು ನಮ್ಮೀ ಪ್ರೀತಿ ನನಸಾದರು ಕೊನೆಯಿಲ್ಲದ ಕನಸೇ ನಮ್ಮೀ ಪ್ರೀತಿ  ನಮ್ಮೀ ಪ್ರೀತಿ ಕನಸೇ ಸರಿ ಆದರೂ ಅನಿಸಬಾರದು ಕಲ್ಪನೆಯ ರೀತಿ

ನೀ ಮುದ್ದು ಮಾಯಾವಿ......❤️

ನನ್ನ ಪ್ರತಿ ಉಸಿರಿನಲ್ಲೂ  ಗಾಳಿಯಂತೆ ಬೆರೆತಿರುವೆ ನೀನು ಹೃದಯಾಂತರಾಳದಲಿ  ಬಡಿತದಂತೆ ನೆಲೆಸಿರುವೆ ನೀನು ಯಾವ ಜನ್ಮದ  ಮೈತ್ರಿಯೋ ಏನೋ ಅರಿಯದಾದೆ ನಾನು ವಂದಿಸುವೆ ಆ ದೇವರಿಗೆ  ಮನಸಾರೆ ಇನ್ನೂ  ನೀ ನನಗೆ ಆ ದೇವರೇ ನೀಡಿದ ವರದಾನವೇ ನೀನು  ಮುದ್ದು ಮಾಯಾವಿ...... ಲವ್ ಯು ಮೂರು ಚಿನ್ನಿ....... ಮುದ್ದು ಮನಸು.....✍️
ಮುಸ್ಸಂಜೆ  ಸಮಯದಲ್ಲಿ  ನನ್ನ ನೆನೆದು  ನಿನ್ನಲ್ಲಿ ನಿನ್ನ ನೆನೆಯುತ್ತಾ  ನಾನ್ನಿಲ್ಲಿ ಏನೋ ಒಂದು  ಬೇಸರದ  ಸಂಗತಿ  ನಮ್ಮಿಬ್ಬರ  ಮನದಲ್ಲಿ.......❤️ ಮುದ್ದು ಮನಸು......

ನನ್ನೊಲವಿನ ಚಲುವೆ.......

Image
 ಓ ಚೆಲುವೆ ನನ್ನೆದೆಯ ಬೆಳದಿಂಗಳ ಬಾಲೆ ಬಾಲೆ ನೀ ನನ್ನೆದುರಲ್ಲಿ ಇದ್ದರೂ ಇಲ್ಲದಿದ್ದರೂ ಇಲ್ಲದಿದ್ದರೂ ಸದಾ ನನ್ನ  ಮನದಂಗಳದಲ್ಲಿ ಬೀಸುವ ತಂಗಾಳಿಯಂತೆ ತಂಗಾಳಿಯಲ್ಲಿ ಹೊಳೆವ  ತಿಂಗಳ ಚಂದಿರನ ಬೆಳಕಿನಂತೆ ಬೆಳಕಿನ ನಸುಕಿನಲಿ  ಮುಸುಕಿದ ಮಂಜಿನಂತೆ  ಮಂಜು ಕರಗುವ ಸಮಯದಲ್ಲಿ ಸದಾ ಕಾಡುವುದು ಗೆಳತಿ ನಿನ್ನ ನೆನಪು ನೆನಪಿನಲ್ಲಿ ಪ್ರತಿಕ್ಷಣವೂ ನೆನೆದು  ಬೆಳದಿಂಗಳ ರಾತ್ರಿಯಲ್ಲಿ ಕುರುವೆ ಕುಳಿತು ಅದೆಷ್ಟು ಬಾರಿ ಹತ್ತಿರುವ  ನನ್ನ ಮನದ ಮಹಲಿನಲ್ಲಿ ಮಹಲಿನಲ್ಲಿ ಉಳಿದಿರುವೆ ಅಡಗಿ ಅಡಗಿ ನೀನೆ ಚಂದಿರನ  ಬೆಳದಿಂಗಳನ್ನು ಮರೆಮಾಚಿದ ಬೆಡಗಿ ಬೆಡಗಿ ನೀ ನನ್ನ ಪ್ರೀತಿಯ ಹುಡುಗಿ. ಮುದ್ದುಮನಸು