ನನ್ನೊಲವಿನ ಚಲುವೆ.......
ಓ ಚೆಲುವೆ ನನ್ನೆದೆಯ ಬೆಳದಿಂಗಳ ಬಾಲೆ
ಬಾಲೆ ನೀ ನನ್ನೆದುರಲ್ಲಿ ಇದ್ದರೂ ಇಲ್ಲದಿದ್ದರೂ
ಇಲ್ಲದಿದ್ದರೂ ಸದಾ ನನ್ನ
ಮನದಂಗಳದಲ್ಲಿ ಬೀಸುವ ತಂಗಾಳಿಯಂತೆ
ತಂಗಾಳಿಯಲ್ಲಿ ಹೊಳೆವ
ತಿಂಗಳ ಚಂದಿರನ ಬೆಳಕಿನಂತೆ
ಬೆಳಕಿನ ನಸುಕಿನಲಿ
ಮುಸುಕಿದ ಮಂಜಿನಂತೆ
ಮಂಜು ಕರಗುವ ಸಮಯದಲ್ಲಿ
ಸದಾ ಕಾಡುವುದು ಗೆಳತಿ ನಿನ್ನ ನೆನಪು
ನೆನಪಿನಲ್ಲಿ ಪ್ರತಿಕ್ಷಣವೂ ನೆನೆದು
ಬೆಳದಿಂಗಳ ರಾತ್ರಿಯಲ್ಲಿ ಕುರುವೆ
ಕುಳಿತು ಅದೆಷ್ಟು ಬಾರಿ ಹತ್ತಿರುವ
ನನ್ನ ಮನದ ಮಹಲಿನಲ್ಲಿ
ಮಹಲಿನಲ್ಲಿ ಉಳಿದಿರುವೆ ಅಡಗಿ
ಅಡಗಿ ನೀನೆ ಚಂದಿರನ
ಬೆಳದಿಂಗಳನ್ನು ಮರೆಮಾಚಿದ ಬೆಡಗಿ
ಬೆಡಗಿ ನೀ ನನ್ನ ಪ್ರೀತಿಯ ಹುಡುಗಿ.
ಮುದ್ದುಮನಸು

Comments
Post a Comment