Posts

Showing posts from May, 2020

ನೀ ಮುದ್ದು ಮಾಯಾವಿ......❤️

ನನ್ನ ಪ್ರತಿ ಉಸಿರಿನಲ್ಲೂ  ಗಾಳಿಯಂತೆ ಬೆರೆತಿರುವೆ ನೀನು ಹೃದಯಾಂತರಾಳದಲಿ  ಬಡಿತದಂತೆ ನೆಲೆಸಿರುವೆ ನೀನು ಯಾವ ಜನ್ಮದ  ಮೈತ್ರಿಯೋ ಏನೋ ಅರಿಯದಾದೆ ನಾನು ವಂದಿಸುವೆ ಆ ದೇವರಿಗೆ  ಮನಸಾರೆ ಇನ್ನೂ  ನೀ ನನಗೆ ಆ ದೇವರೇ ನೀಡಿದ ವರದಾನವೇ ನೀನು  ಮುದ್ದು ಮಾಯಾವಿ...... ಲವ್ ಯು ಮೂರು ಚಿನ್ನಿ....... ಮುದ್ದು ಮನಸು.....✍️
ಮುಸ್ಸಂಜೆ  ಸಮಯದಲ್ಲಿ  ನನ್ನ ನೆನೆದು  ನಿನ್ನಲ್ಲಿ ನಿನ್ನ ನೆನೆಯುತ್ತಾ  ನಾನ್ನಿಲ್ಲಿ ಏನೋ ಒಂದು  ಬೇಸರದ  ಸಂಗತಿ  ನಮ್ಮಿಬ್ಬರ  ಮನದಲ್ಲಿ.......❤️ ಮುದ್ದು ಮನಸು......

ನನ್ನೊಲವಿನ ಚಲುವೆ.......

Image
 ಓ ಚೆಲುವೆ ನನ್ನೆದೆಯ ಬೆಳದಿಂಗಳ ಬಾಲೆ ಬಾಲೆ ನೀ ನನ್ನೆದುರಲ್ಲಿ ಇದ್ದರೂ ಇಲ್ಲದಿದ್ದರೂ ಇಲ್ಲದಿದ್ದರೂ ಸದಾ ನನ್ನ  ಮನದಂಗಳದಲ್ಲಿ ಬೀಸುವ ತಂಗಾಳಿಯಂತೆ ತಂಗಾಳಿಯಲ್ಲಿ ಹೊಳೆವ  ತಿಂಗಳ ಚಂದಿರನ ಬೆಳಕಿನಂತೆ ಬೆಳಕಿನ ನಸುಕಿನಲಿ  ಮುಸುಕಿದ ಮಂಜಿನಂತೆ  ಮಂಜು ಕರಗುವ ಸಮಯದಲ್ಲಿ ಸದಾ ಕಾಡುವುದು ಗೆಳತಿ ನಿನ್ನ ನೆನಪು ನೆನಪಿನಲ್ಲಿ ಪ್ರತಿಕ್ಷಣವೂ ನೆನೆದು  ಬೆಳದಿಂಗಳ ರಾತ್ರಿಯಲ್ಲಿ ಕುರುವೆ ಕುಳಿತು ಅದೆಷ್ಟು ಬಾರಿ ಹತ್ತಿರುವ  ನನ್ನ ಮನದ ಮಹಲಿನಲ್ಲಿ ಮಹಲಿನಲ್ಲಿ ಉಳಿದಿರುವೆ ಅಡಗಿ ಅಡಗಿ ನೀನೆ ಚಂದಿರನ  ಬೆಳದಿಂಗಳನ್ನು ಮರೆಮಾಚಿದ ಬೆಡಗಿ ಬೆಡಗಿ ನೀ ನನ್ನ ಪ್ರೀತಿಯ ಹುಡುಗಿ. ಮುದ್ದುಮನಸು